ವೈಚಾರಿಕತೆ - 
	ಜೀವನಸಮಸ್ಯೆಗಳನ್ನು ಕಾರ್ಯಕಾರಣ ಪಾತಳಿಯಲ್ಲಿ ಜ್ಞೇಯನಿಷ್ಠವಾಗಿ (ವಸ್ತುನಿಷ್ಠವಾಗಿ) ಪರಿಹರಿಸಲು ಪ್ರಯತ್ನಿಸುವಾತನ ಮನಃಸ್ಥಿತಿ (ರ್ಯಾಶನಲಿಸಮ್). ಸಮಸ್ತ ನೈಸರ್ಗಿಕ ಕ್ರಿಯೆಗಳು ಕಾರ್ಯ-ಕಾರಣ ಸಂಬಂಧ (ಕಾಸ್-ಇಫೆಕ್ಟ್ ರಿಲೇಶನ್‍ಶಿಪ್) ಬಂಧಿತವಾಗಿವೆ: ಕಾರ್ಯರಹಿತ ಕಾರಣವಿಲ್ಲ, ಕಾರಣರಹಿತ ಕಾರ್ಯವಿಲ್ಲ. ವಿಜ್ಞಾನ ಸಮಸ್ಯೆಗಳನ್ನು ಎದುರಿಸುವಾಗ ವೈಚಾರಿಕತೆ ಅನಿವಾರ್ಯ ಆವಶ್ಯಕತೆ. ಇದರಲ್ಲಿ ಪ್ರಾಯೋಗಿಕ ತಪಾಸಣೆಯೂ ಸೇರುತ್ತದೆ ಎಂದೇ ಈ ಸಂದರ್ಭದಲ್ಲಿ ವೈಚಾರಿಕತೆ ಪದ ವೈಜ್ಞಾನಿಕತೆ ಪದವಾಗುತ್ತದೆ.									

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ